~ ಕರ್ನಾಟಕ ಸಂಘ ದುಬೈ ಮತ್ತು ಹೃದಯವಾಹಿನಿ ಪತ್ರಿಕೆ ಜಂಟಿ ಕಾರ್ಯಕ್ರಮ |
~ ವೈಶಿಷ್ಟಪೂರ್ಣ ಮೈಸೂರು ಅರಮನೆ ಹಿನ್ನಲೆಯ ಬರ್ಜರಿ ವೇದಿಕೆ
~ ಕನ್ನಡಿಗರಿಂದ ತುಂಬಿತುಳುಕಿದ ಸಭಾಂಗಣ
~ ಹಿಂದೆಂದೂ ವಿದೇಶದಲ್ಲಿ ನಡೆಯದಂತಹ ಕರ್ನಾಟಕದ ಕಲೆ, ಸಂಸ್ಕ್ರತಿ ಬಿಂಬಿಸುವ ವೈಭವಪೂರ್ಣದಿಂದ ಮೆರೆದ ಸಾಂಸ್ಕೃತಿಕ ಅದ್ದೂರಿಯ ಮರೆವಣಿಗೆ!
~ ಕರ್ನಾಟಕದಿಂದ ಬಂದ 120 ಮಂದಿ ವಿವಿದ ವೃತ್ತಿ, ಕ್ಷೇತ್ರಗಳಲ್ಲಿ ನಿಪುಣತೆ ಪಡೆದ ಕಲಾವಿದರು, ಕವಿಗಳು, ಉದ್ಯಮಿಗಳು ಹಾಗು ಪತ್ರಕರ್ತರ ನಿಯೋಗ
~ ಪ್ರಥಮ ಭಾರಿಗೆ ಗಲ್ಫ್ ನಲ್ಲಿ ಬೆಂಗಳೂರಿನ ಮಹಿಳಾ ಡೊಳ್ಳು ಕುಣಿತ
~ ಸಂಸತ್ ಸದಸ್ಯ ಡಿ.ವಿ.ಸದಾನಂದ ಗೌಡರಿಂದ ಉದ್ಘಾಟನೆ
~ ಸಚಿವ ಕೃಷ್ಣ ಪಾಲೇಮಾರ್ ರಿಂದ ’ ಹನಿಹನಿ ವಿಶ್ವವಾಹಿನಿ’ ಪುಸ್ತಕ ಬಿಡುಗಡೆ
~ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅತಿಥಿ
~ ಸಾಹಿತಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಸಮ್ಮೇಳನದ ಅಧ್ಯಕ್ಷ.
~ ಪ್ರಮುಖ ಗಲ್ಫ್ ಕನ್ನಡಿಗರಾದ ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ, ಜನಾಬ್ ಜಫ್ರುಲ್ಲಾ ಖಾನ್ ರ ಉಪಸ್ಥಿತಿ
~ ಕರ್ನಾಟಕ ಗೃಹ ಮಂಡಳಿ ಅದ್ಯಕ್ಷ ಜಿ.ಟಿ.ದೇವೇಗೌಡ ಅತಿಥಿ
~ ಅದ್ಯಕ್ಷರು ಕರ್ನಾಟಕ ಸಂಘ ಹಾಗೂ ಸ್ವಾಗತ ಸಮಿತಿ ಸಿ.ಆರ್.ಶೆಟ್ಟಿ ಸ್ವಾಗತ ಬಾಷಣ
~ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ.ಮಂಜುನಾಥ ಸಾಗರ್ ರಿಂದ ಪ್ರಾಸ್ತಾವಿಕ ಭಾಷಣ
ದುಬೈ ಅ.೨೦: ಹೊರನಾಡಿನ ಕನ್ನಡಿಗರನ್ನು ಒಂದುಗೂಡಿಸುವುದರೊಂದಿಗೆ ಕನ್ನಡ ಸಂಸ್ಕೃತಿ ವಿಚಾರಗಳನ್ನು ವಿದೇಶೀಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಅಲ್ಲಿನ ಶೇಖ್ ರಾಷೀದ್ ಸಭಾಂಗಣದಲ್ಲಿ ಇದು 6ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸ ಲಾಯಿತು.
ಇದೇ ಮೊದಲಬಾರಿಗೆ ಕರ್ನಾಟಕದ ಸಾಂಸ್ಕೃತಿಯ ವೈಭವವನ್ನು ಬಿಂಬಿಸುವ ಅಭೂತಪೂರ್ವ ಮೆರೆವಣಿಗೆಯೊಡನೆ ಗಣ್ಣ್ಯರನ್ನು ಹಾಗೂ ಅತಿಥಿಗಳನ್ನು ಸಮ್ಮೇಳನದ ಸಭಾಂಗಣಕ್ಕೆ ಕರೆತರಲಾಯಿತು.
ವೈಶಿಷ್ಟಪೂರ್ಣ ಮೈಸೂರು ಅರಮನೆ ಹಿನ್ನಲೆಯ ಬರ್ಜರಿ ವೇದಿಕೆಯಲ್ಲಿ ಪುಷ್ಪಾಂಜಲಿ ನೃತ್ಯಪ್ರಸ್ತುತಪಡಿಸಿ ಕಾರ್ಯಕ್ರಮ ಆರಂಭಗೊಂಡಿತು.
ಸಮ್ಮೇಳನದ ಮುಖ್ಯ ಅತಿಥಿಗಳಾಗಿ ದುಬೈ ಬಾರತೀಯ ಕಾನ್ಸಲ್ ಜನೆರಲ್ ವೇಣು ರಾಜಮನಿ ಆಗಮಿಸಿದ್ದರು.
ಸಮ್ಮೇಳನವನ್ನು ಸಂಸತ್ ಸದಸ್ಯ ಡಿ.ವಿ.ಸದಾನಂದ ಗೌಡರು ಹಣತಿ ಹಚ್ಚಿ ಉದ್ಘಾಟಿಸಿ ದರು. ಅವರೊಡನೆ ವೇದಿಕೆಯಲ್ಲಿ ನೆರೆದ ಎಲ್ಲಾ ಗಣ್ಣರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.
ಆರ್ಥಿಕವಾಗಿ ಹಿಂದುಳಿದ ಪತ್ರಿಭಾನ್ವಿತ ಕಲಾವಿದರಿಗೆ ಈ ಬಾರಿ ಕಲಾ ಪ್ರದರ್ಶನ ನೀಡಲು ವೇದಿಕೆ ಕಲ್ಪಿಸುವುದರೊಂದಿಗೆ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ದಾನಿಗಳ ಸಹಾಯ ಪಡೆಯಲಾಗಿದೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ.ಮಂಜುನಾಥ ರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಮಾಹಿತಿ ನೀಡಿದರು .
ಸಾಹಿತಿ ಡಾ.ಸಿದ್ದಲಿಂಗ ಪಟ್ಟಣ ಶಟ್ಟಿ ಈ ಬಾರಿಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ.
ಸ್ವಾಗತ ಸಮಿತಿ ಹಾಗೂ ಕರ್ನಾಟಕ ಸಂಘದ ಅದ್ಯಕ್ಷ ಸಿ.ಆರ್.ಶೆಟ್ಟಿಯವರು ಸ್ವಾಗತ ಭಾಷಣ ಮಾಡಿದರು
ಇದೇ ಸಂದರ್ಭದಲ್ಲಿ ಸಂಗಮೇಶ್ ಬಾದವಾಡ್ಗಿಯವರ ‘ಹನಿಹನಿ ವಿಶ್ವವಾಹಿನಿ’ ಪುಸ್ತಕವನ್ನು ಸಚಿವ ಕೃಷ್ಣ ಪಾಲೇಮಾರ್ ಬಿಡುಗಡೆಗೊಳಿಸಿದರು
ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹಾಗೂಕರ್ನಾಟಕ ಗೃಹ ಮಂಡಳಿ ಅದ್ಯಕ್ಷ ಜಿ.ಟಿ.ದೇವೇಗೌಡ ಭಾಗವಹಿಸಿದರು.
ಗಣ್ಯರಿಗೆ ಸನ್ಮಾನ ಸೇರಿದಂತೆ ಕವಿಗೋಷ್ಠಿ, ವೈದ್ಯಕೀಯ ಗೋಷ್ಠಿ, ವಿವಿಧ ವಿಚಾರಗಳಲ್ಲಿ ಚರ್ಚೆ ನಡೆಯಿತು. ರಾಜ್ಯದ ಹಲವಾರು ತಂಡಗಳು ಹಾಗೂ ಸ್ಥಳೀಯ ಪ್ರತಿಭೆಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಸಿದ್ಧ ಕರ್ನಾಟಕ ಉದ್ಯಮಿಗಳಾದ ಡಾ.ಬಿ.ಆರ್.ಶೆಟ್ಟಿ, ಜಫ್ರುಲ್ಲ ಖಾನ್, ಸಾದಿಕ್ ಹುಸೇನ್, ಶಶಿ ಶೆಟ್ಟಿ, ಕುಮಾರ್ ಶೆಟ್ಟಿ, ರವೀಶ್ ಗೌಡ, ಪ್ರವೀಣ್ ಶೆಟ್ಟಿ, ರವಿ.ಆರ್ ಉಪಾದ್ಯಕ್ಷ ಗಿರೀಶ್ ಶೆಟ್ಟಿ, ಕಾರ್ಯದರ್ಶಿ ಕೃಷ್ಣರಾಜ್ ಶೆಟ್ಟಿ ವೇದಿಕೆಯನ್ನು ಅಲಂಕರಿಸಿದ್ದರು.
ನಮಿತಾ ರಾವ್ ಮತ್ತು ಕುಶಲ ಶೆಟ್ಟಿಯವರು ಕಾರ್ಯಕ್ರಮವನ್ನು ಸಾದರಪಡಿಸಿದರು
ಅಬುದಾಭಿ ಕರ್ನಾಟಕ ಸಂಘದ ಅದ್ಯಕ್ಷ ಸರ್ವೊತ್ತಮ ಶೆಟ್ಟಿ, ಬಹರೈನ್ ಕನ್ನಡ ಸಂಘದ ಅದ್ಯಕ್ಷ ಆಸ್ಟಿನ್ ಸಂತೊಷ್, ಶಾರ್ಜಾ ಕರ್ನಾಟಕ ಸಂಘದ ಅದ್ಯಕ್ಷ ನೋಯಲ್ ಅಲ್ಮೇಡ, ಮಾಜಿ ಅದ್ಯಕ್ಷರಾದ ಗಣೇಶ್ ರೈ, ಪ್ರಭಾಕರ ಅಂಬಲತೆರೆ, ಜೇಮ್ಸ್ ಮೆಂಡೋನ್ಸ, ಹರ್ಮನ್ ಲೂಯಿಸ್, ವಾಲ್ಟರ್ ನಂದಳಿಕೆ, ಅನಂತ ರಾವ್, ಮನೋಹರ್ ತೊನ್ಸೆ, ಇರ್ಷದ್ ಮೂಡಬಿದ್ರಿ, ಗೋಪಿನಾಥ್ ರಾವ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸೌಜನ್ಯ: ಗಲ್ಫ್ ಕನ್ನಡಿಗ